ವಸಂತ ಕನ್ನಡ-ಕನ್ನಡ-ಇಂಗ್ಲಿಷ್ ಸಂಕ್ಷಿಪ್ತ ನಿಘಂಟು' ಕನ್ನಡ ಕಲಿಕೆ ಹಾಗೂ ಅನುವಾದ ಕಾರ್ಯಗಳಿಗೂ ಉಪಯುಕ್ತ ಕನ್ನಡ ಸಾರಸ್ವತ ಲೋಕಕ್ಕೆ ವಿವರಣಾತ್ಮಕವಾಗಿರುವ, ಮೂರು ಸಂಪುಟಗಳ ಒಂದು ಬೃಹತ್ ಕನ್ನಡ-ಇಂಗ್ಲಿಷ್ ನಿಘಂಟನ್ನು ನೀಡಿರುವ ಶ್ರೀ ವಿ. ಕೃಷ್ಣ ಅವರು ವಿದ್ಯಾರ್ಥಿಗಳು, ಅನುವಾದಕರು, ಸಾಮಾನ್ಯ ಭಾಷಾಭ್ಯಾಸಿಗಳು ಹಾಗೂ ಕನ್ನಡ ಮತ್ತು ಇಂಗ್ಲಿಷನ್ನು ಕಲಿಯಬಯಸುವ ಅನ್ಯಭಾಷಿಕರಿಗಾಗಿ ಈ ಕನ್ನಡ-ಕನ್ನಡ-ಇಂಗ್ಲಿಷ್ ಸಂಕ್ಷಿಪ್ತ ನಿಘಂಟನ್ನು ರಚಿಸಿದ್ದಾರೆ. ಇದು ವಿವರಣಾತ್ಮಕವಾಗಿರುವುದರಿಂದ ಕನ್ನಡ ಪದಗಳ ಅರ್ಥ ಹಾಗೂ ಅದರ ಛಾಯೆಗಳನ್ನು ನಿಖರವಾಗಿ ತಿಳಿಯಲು ಸಹಾಯಕವಾಗಿದೆ. ವಿವರಣೆಗೆ ಸಾಧ್ಯವಾದಷ್ಟೂ ಸರಳ ಇಂಗ್ಲಿಷ್ ಪದಗಳನ್ನು ಬಳಸಲಾಗಿದೆ. ಈ ನಿಘಂಟಿಗಾಗಿ ಪದಗಳನ್ನು ಆಯ್ಕೆಮಾಡುವಾಗ ಪ್ರಸ್ತುತ ಬಳಸುತ್ತಿರುವ ಹಾಗೂ ನಡುಗನ್ನಡದ ಪ�... See more
ವಸಂತ ಕನ್ನಡ-ಕನ್ನಡ-ಇಂಗ್ಲಿಷ್ ಸಂಕ್ಷಿಪ್ತ ನಿಘಂಟು' ಕನ್ನಡ ಕಲಿಕೆ ಹಾಗೂ ಅನುವಾದ ಕಾರ್ಯಗಳಿಗೂ ಉಪಯುಕ್ತ ಕನ್ನಡ ಸಾರಸ್ವತ ಲೋಕಕ್ಕೆ ವಿವರಣಾತ್ಮಕವಾಗಿರುವ, ಮೂರು ಸಂಪುಟಗಳ ಒಂದು ಬೃಹತ್ ಕನ್ನಡ-ಇಂಗ್ಲಿಷ್ ನಿಘಂಟನ್ನು ನೀಡಿರುವ ಶ್ರೀ ವಿ. ಕೃಷ್ಣ ಅವರು ವಿದ್ಯಾರ್ಥಿಗಳು, ಅನುವಾದಕರು, ಸಾಮಾನ್ಯ ಭಾಷಾಭ್ಯಾಸಿಗಳು ಹಾಗೂ ಕನ್ನಡ ಮತ್ತು ಇಂಗ್ಲಿಷನ್ನು ಕಲಿಯಬಯಸುವ ಅನ್ಯಭಾಷಿಕರಿಗಾಗಿ ಈ ಕನ್ನಡ-ಕನ್ನಡ-ಇಂಗ್ಲಿಷ್ ಸಂಕ್ಷಿಪ್ತ ನಿಘಂಟನ್ನು ರಚಿಸಿದ್ದಾರೆ. ಇದು ವಿವರಣಾತ್ಮಕವಾಗಿರುವುದರಿಂದ ಕನ್ನಡ ಪದಗಳ ಅರ್ಥ ಹಾಗೂ ಅದರ ಛಾಯೆಗಳನ್ನು ನಿಖರವಾಗಿ ತಿಳಿಯಲು ಸಹಾಯಕವಾಗಿದೆ. ವಿವರಣೆಗೆ ಸಾಧ್ಯವಾದಷ್ಟೂ ಸರಳ ಇಂಗ್ಲಿಷ್ ಪದಗಳನ್ನು ಬಳಸಲಾಗಿದೆ. ಈ ನಿಘಂಟಿಗಾಗಿ ಪದಗಳನ್ನು ಆಯ್ಕೆಮಾಡುವಾಗ ಪ್ರಸ್ತುತ ಬಳಸುತ್ತಿರುವ ಹಾಗೂ ನಡುಗನ್ನಡದ ಪದಗಳನ್ನು ವಿಶೇಷವಾಗಿ ಗಮನದಲ್ಲಿಟ್ಟುಕೊಳ್ಳಲಾಗಿದೆ. ಇದು ೧೮,೩೦೦ ಮುಖ್ಯೋಲ್ಲೇಖಗಳನ್ನೂ, ಅವುಗಳಿಗೆ ೩೦,೦೦೦ಕ್ಕೂ ಹೆಚ್ಚು ಅರ್ಥವಿವರಣೆಗಳನ್ನೂ ಒಳಕೊಂಡಿದ್ದು, ಈಗ ಮಾರುಕಟ್ಟೆಯಲ್ಲಿ ದೊರೆಯುವ ಕನ್ನಡ-ಇಂಗ್ಲಿಷ್ ನಿಘಂಟುಗಳಿಗಿಂತ ದೊಡ್ಡದೂ, ವಿಶಾಲಾರ್ಥಗಳನ್ನು ನೀಡುವಂತಹುದೂ ಆಗಿದೆ. ಉಚಿತ ಕೊಡುಗೆಯಾದ ‘ತತ್ಸಮ-ತದ್ಭವ ಕೋಶ’ ಹಿರಿಯ ಶಿಕ್ಷಣತಜ್ಞ ಎಂ.ವಿ. ನಾಗರಾಜರಾವ್ ಅವರು ಸಿದ್ಧಪಡಿಸಿರುವ ‘ತತ್ಸಮ-ತದ್ಭವ ಕೋಶ’ವು ಬಹಳ ಜನಾನುರಾಗಿ ಕೃತಿಯಾಗಿದ್ದು ವಿದ್ಯಾರ್ಥಿಗಳ ಜ್ಞಾನವರ್ಧನೆಗೆ ಉತ್ತಮ ಕೊಡುಗೆಯನ್ನು ನೀಡುತ್ತದೆ. ಕೃತಿಯಲ್ಲಿ ತತ್ಸಮ-ತದ್ಭವ ಪದಗಳು ಮಾತ್ರವಲ್ಲದೆ ವಿರುದ್ಧಾರ್ಥಕ ಪದಗಳು, ಶಬ್ದ ಸಮೂಹಗಳಿಗೆ ಒಂದೇ ಪದ, ಚಂಪೂ, ಶತಕ, ವಚನ ಮೊದಲಾದ ಪ್ರಮುಖ ಸಾಹಿತ್ಯ ರೂಪಗಳ ವಿವರಣೆ ಇದೆ. ಗಾದೆಗಳೂ ಸಹ ಇವೆ.