*ತಿರುಪತಿ ತಿಮ್ಮಪ್ಪ* ಭಾರತೀಯ ಸಂಸ್ಕೃತಿಯಲ್ಲಿ ಗುಡಿ-ಗೋಪುರಗಳಿಗೆ ಮಹತ್ತ್ವದ ಸ್ಥಾನವಿದೆಯಷ್ಟೆ. ಇಂಥ ದೇವಾಲಯಗಳಲ್ಲಿ ತಿರುಮಲೆ ತಿರುಪತಿಗಿರುವ ಸ್ಥಾನ ವಿಶೇಷವಾದದ್ದು. ಅನಂತ ಆಕರ್ಷಣೆ-ಶಕ್ತಿಗಳಿಂದ ವಿರಾಜಿಸುತ್ತಿರುವ ತಿರುಪತಿ ತಿಮ್ಮಪ್ಪ, ಅವನನ್ನು ಸುತ್ತುವರೆದಿರುವ ಪುರಾಣ- ಕಥೆಗಳು, ಅವನು ನೆಲೆನಿಂತ ಬೆಟ್ಟ, ಅಲ್ಲಿಯ ಆಲಯ, ಆಲಯದ ವಾಸ್ತುಶಿಲ್ಪ, ಗುಡಿಯಲ್ಲಿ ನಡೆಯುವ ಅರ್ಚನೆ-ಪೂಜಾಪದ್ಧತಿಗಳು, ಅಲ್ಲಿ ಜರಗುವ ಉತ್ಸವ-ವೈಭವಗಳು, ಅದಕ್ಕೆ ಹೊಂದಿಕೊಂಡ ಆಗಮ-ಶಾಸ್ತ್ರ-ಸಾಹಿತ್ಯ-ಶಾಸನ--ಹೀಗೆ ಪ್ರತಿ ವಿವರವೂ ಆಸ್ತಿಕರ ಪಾಲಿಗೆ ಪರಮಪವಿತ್ರವೆನಿಸಿದೆ; ಆಸಕ್ತರ ಪಾಲಿಗೆ ಕುತೂಹಲ ವಿಷಯವೆನಿಸಿದೆ. ಒಟ್ಟಿನಲ್ಲಿ ಹೇಳುವುದಾದರೆ, ತಿರುಪತಿ ತಿಮ್ಮಪ್ಪ ನೂರಾರು ವರ್ಷಗಳಿಂದ ಭಾರತೀಯ ಸಂಸ್ಕೃತಿಪ್ರವಾಹದ ಒಂದು ಪ್ರಧಾನ ಸ್ರೋತವೆನಿಸಿದ�... See more
*ತಿರುಪತಿ ತಿಮ್ಮಪ್ಪ* ಭಾರತೀಯ ಸಂಸ್ಕೃತಿಯಲ್ಲಿ ಗುಡಿ-ಗೋಪುರಗಳಿಗೆ ಮಹತ್ತ್ವದ ಸ್ಥಾನವಿದೆಯಷ್ಟೆ. ಇಂಥ ದೇವಾಲಯಗಳಲ್ಲಿ ತಿರುಮಲೆ ತಿರುಪತಿಗಿರುವ ಸ್ಥಾನ ವಿಶೇಷವಾದದ್ದು. ಅನಂತ ಆಕರ್ಷಣೆ-ಶಕ್ತಿಗಳಿಂದ ವಿರಾಜಿಸುತ್ತಿರುವ ತಿರುಪತಿ ತಿಮ್ಮಪ್ಪ, ಅವನನ್ನು ಸುತ್ತುವರೆದಿರುವ ಪುರಾಣ- ಕಥೆಗಳು, ಅವನು ನೆಲೆನಿಂತ ಬೆಟ್ಟ, ಅಲ್ಲಿಯ ಆಲಯ, ಆಲಯದ ವಾಸ್ತುಶಿಲ್ಪ, ಗುಡಿಯಲ್ಲಿ ನಡೆಯುವ ಅರ್ಚನೆ-ಪೂಜಾಪದ್ಧತಿಗಳು, ಅಲ್ಲಿ ಜರಗುವ ಉತ್ಸವ-ವೈಭವಗಳು, ಅದಕ್ಕೆ ಹೊಂದಿಕೊಂಡ ಆಗಮ-ಶಾಸ್ತ್ರ-ಸಾಹಿತ್ಯ-ಶಾಸನ--ಹೀಗೆ ಪ್ರತಿ ವಿವರವೂ ಆಸ್ತಿಕರ ಪಾಲಿಗೆ ಪರಮಪವಿತ್ರವೆನಿಸಿದೆ; ಆಸಕ್ತರ ಪಾಲಿಗೆ ಕುತೂಹಲ ವಿಷಯವೆನಿಸಿದೆ. ಒಟ್ಟಿನಲ್ಲಿ ಹೇಳುವುದಾದರೆ, ತಿರುಪತಿ ತಿಮ್ಮಪ್ಪ ನೂರಾರು ವರ್ಷಗಳಿಂದ ಭಾರತೀಯ ಸಂಸ್ಕೃತಿಪ್ರವಾಹದ ಒಂದು ಪ್ರಧಾನ ಸ್ರೋತವೆನಿಸಿದ್ದಾನೆ. ಇಂಥ ದೈವ ತಿಮ್ಮಪ್ಪನನ್ನೂ, ಅವನ ಗುಡಿ ವೇಂಗಡವನ್ನೂ ಹಲವು ಧಾರೆಗಳಲ್ಲಿ ವಿವರಿಸುವ ಬೃಹದ್ಗ್ರಂಥವೇ ಪ್ರಕೃತಕೃತಿ ತಿರುಪತಿ ತಿಮ್ಮಪ್ಪ.