ಇವು ‘151 ಕಥೆಗಳ ಪುಸ್ತಕ’ಮಾಲೆಯಲ್ಲಿ ಪೋಣಿಸಲ್ಪಟ್ಟಿರುವ ಕುಸುಮಗಳಾಗಿವೆ. ಮಾಲೆಯ ಇತರ ಪುಸ್ತಕಗಳಂತೆಯೇ ಇವುಗಳ ಪ್ರತಿ ಪುಟದಲ್ಲೂ ಎರಡೆರಡು ಬಹುವರ್ಣದ ಚಿತ್ರಗಳು ಕಂಗೊಳಿಸುತ್ತಿವೆ; ಮುದ್ರಣವು ಆರ್ಟ್ ಕಾಗದದ ಮೇಲೆ ಆಗಿರುವುದರಿಂದ ಪುಸ್ತಕಗಳಿಗೆ ವಿಶೇಷ ಸೌಂದರ್ಯಿ ಒದಗಿ ಬಂದಿದೆ ; ಆಕರ್ಷಕ ಸರಳ ನಿರೂಪಣೆಯಿರುವುದರಿಂದ ವಿದ್ಯಾರ್ಥಿಗಳಲ್ಲಿ ಓದಿನತ್ತ ಆಸಕ್ತಿ ಮೂಡುವುದು ನಿಶ್ಚಿತವಿದೆ. ರಾಮಾಯಣ – ಮಹಾಭಾರತ - ಶ್ರೀಕೃಷ್ಣನ ಕಥೆಗಳು, ಪ್ರಾಣಿಗಳ ಕಥೆಗಳು, ತೆನಾಲಿ ರಾಮ ಹಾಗೂ ಅಕ್ಬರ್ - ಬೀರ್ಬಲ್ ಕಥೆಗಳು, ವಿಕ್ರಮ - ಬೇತಾಳ ಕಥೆಗಳು, ಸಾಹಸ ಕಥೆಗಳು, ಅಜ್ಜ – ಅಜ್ಜಿ – ಅಮ್ಮ ಹೇಳಿದ ಕಥೆಗಳು, ನೀತಿ ಕಥೆಗಳು, ಪ್ರೇರಣಾತ್ಮಕ ಕಥೆಗಳು, ವ್ಯಕ್ತಿತ್ವ ವಿಕಸನದ ಕಥೆಗಳು ಹೀಗೆ ಕಥೆಗಳ ದೊಡ್ಡ ರಾಶಿಯೇ ಮಾಲೆಯಲ್ಲಿದ್ದು ಇವು ಕಣ್ಣು ಮತ್ತು ಮನಸ್ಸಿ�... See more
ಇವು ‘151 ಕಥೆಗಳ ಪುಸ್ತಕ’ಮಾಲೆಯಲ್ಲಿ ಪೋಣಿಸಲ್ಪಟ್ಟಿರುವ ಕುಸುಮಗಳಾಗಿವೆ. ಮಾಲೆಯ ಇತರ ಪುಸ್ತಕಗಳಂತೆಯೇ ಇವುಗಳ ಪ್ರತಿ ಪುಟದಲ್ಲೂ ಎರಡೆರಡು ಬಹುವರ್ಣದ ಚಿತ್ರಗಳು ಕಂಗೊಳಿಸುತ್ತಿವೆ; ಮುದ್ರಣವು ಆರ್ಟ್ ಕಾಗದದ ಮೇಲೆ ಆಗಿರುವುದರಿಂದ ಪುಸ್ತಕಗಳಿಗೆ ವಿಶೇಷ ಸೌಂದರ್ಯಿ ಒದಗಿ ಬಂದಿದೆ ; ಆಕರ್ಷಕ ಸರಳ ನಿರೂಪಣೆಯಿರುವುದರಿಂದ ವಿದ್ಯಾರ್ಥಿಗಳಲ್ಲಿ ಓದಿನತ್ತ ಆಸಕ್ತಿ ಮೂಡುವುದು ನಿಶ್ಚಿತವಿದೆ. ರಾಮಾಯಣ – ಮಹಾಭಾರತ - ಶ್ರೀಕೃಷ್ಣನ ಕಥೆಗಳು, ಪ್ರಾಣಿಗಳ ಕಥೆಗಳು, ತೆನಾಲಿ ರಾಮ ಹಾಗೂ ಅಕ್ಬರ್ - ಬೀರ್ಬಲ್ ಕಥೆಗಳು, ವಿಕ್ರಮ - ಬೇತಾಳ ಕಥೆಗಳು, ಸಾಹಸ ಕಥೆಗಳು, ಅಜ್ಜ – ಅಜ್ಜಿ – ಅಮ್ಮ ಹೇಳಿದ ಕಥೆಗಳು, ನೀತಿ ಕಥೆಗಳು, ಪ್ರೇರಣಾತ್ಮಕ ಕಥೆಗಳು, ವ್ಯಕ್ತಿತ್ವ ವಿಕಸನದ ಕಥೆಗಳು ಹೀಗೆ ಕಥೆಗಳ ದೊಡ್ಡ ರಾಶಿಯೇ ಮಾಲೆಯಲ್ಲಿದ್ದು ಇವು ಕಣ್ಣು ಮತ್ತು ಮನಸ್ಸಿಗೆ ದೊಡ್ಡ ಹಬ್ಬವೇ ಆಗಿವೆ. ದೊಡ್ಡವರಿಗೂ ಸಹ ಬಹಳ ಇಷ್ಟವಾಗುವ ಪುಸ್ತಕಗಳಾಗಿವೆ ಇವು.