A motivational self-help book written by Vageesh Katti. ಎಲ್ಲರಿಗೂ ಈ ಜೀವನದಲ್ಲಿ ಪ್ರಮುಖವಾಗಿ ಬೇಕಿರುವುದು ಸಕಾರಾತ್ಮಕವಾಗಿ ಸ್ವೀಕರಿಸುವ ಮತ್ತು ಆಗಾಗ ನಮ್ಮನ್ನೇ ನಾವು RE-START ಮಾಡಿಕೊಳ್ಳುವ ಗುಣ. ಸಾಧಿಸಿದವರ ಜೀವನದ ಅನುಭವಗಳನ್ನೇ ಈ ಪುಸ್ತಕದಲ್ಲಿ ಹೇಳಿದ್ದೇನೆ. ಇನ್ಯಾವುದೋ ಬುದ್ಧಿ ಮಾತು, ಆದರ್ಶ, ಗೆಲುವಿನ ಸೀಕ್ರೆಟ್, ಕಣ್ಣಿಗೆ ಕಾಣದ ರಹಸ್ಯ ವಿಷಯಗಳನ್ನು ಇಲ್ಲಿ ಹೇಳಿಲ್ಲ. ಹಾಗೇ ಸುಮ್ಮನೆ ಈ ಜೀವನದಲ್ಲಿ ಎಲ್ಲರೂ ಎದುರಿಸುವ, ಈ ಲೈಫ್ ಅಲ್ಲಿ ಒಂದಲ್ಲ ಒಂದು ರೀತಿ ನಡೆದಿರುವ ಘಟನೆಗಳನ್ನೇ ಸಹಜವಾಗಿ ತಿಳಿಸಿದ್ದೇನೆ. ಸೋತವರ ಕತೆ, ಗೆದ್ದವರ ರಹಸ್ಯ, ಅದರಲ್ಲಿಯೂ ಸೋತು ತಮ್ಮನ್ನೇ RE-START ಮಾಡಿಕೊಂಡು ಗೆಲ್ಲುವ ಸಾಹಸದ ಕತೆಗಳಲ್ಲಿ ಒಂದು ಥ್ರಿಲ್, ಮಾಂತ್ರಿಕತೆ ಇದೆ. ಸಾಮಾನ್ಯವಾಗಿ ಗೆದ್ದವರ ಸಾಹಸ ಕತೆಗಳು, ವಿಜಯಶಾಲಿಯಾದವರ ಸಾಹಸಯಾತ್ರೆ ಎಲ್ಲೆಡೆ ಸೌಂಡ್�... See more
A motivational self-help book written by Vageesh Katti. ಎಲ್ಲರಿಗೂ ಈ ಜೀವನದಲ್ಲಿ ಪ್ರಮುಖವಾಗಿ ಬೇಕಿರುವುದು ಸಕಾರಾತ್ಮಕವಾಗಿ ಸ್ವೀಕರಿಸುವ ಮತ್ತು ಆಗಾಗ ನಮ್ಮನ್ನೇ ನಾವು RE-START ಮಾಡಿಕೊಳ್ಳುವ ಗುಣ. ಸಾಧಿಸಿದವರ ಜೀವನದ ಅನುಭವಗಳನ್ನೇ ಈ ಪುಸ್ತಕದಲ್ಲಿ ಹೇಳಿದ್ದೇನೆ. ಇನ್ಯಾವುದೋ ಬುದ್ಧಿ ಮಾತು, ಆದರ್ಶ, ಗೆಲುವಿನ ಸೀಕ್ರೆಟ್, ಕಣ್ಣಿಗೆ ಕಾಣದ ರಹಸ್ಯ ವಿಷಯಗಳನ್ನು ಇಲ್ಲಿ ಹೇಳಿಲ್ಲ. ಹಾಗೇ ಸುಮ್ಮನೆ ಈ ಜೀವನದಲ್ಲಿ ಎಲ್ಲರೂ ಎದುರಿಸುವ, ಈ ಲೈಫ್ ಅಲ್ಲಿ ಒಂದಲ್ಲ ಒಂದು ರೀತಿ ನಡೆದಿರುವ ಘಟನೆಗಳನ್ನೇ ಸಹಜವಾಗಿ ತಿಳಿಸಿದ್ದೇನೆ. ಸೋತವರ ಕತೆ, ಗೆದ್ದವರ ರಹಸ್ಯ, ಅದರಲ್ಲಿಯೂ ಸೋತು ತಮ್ಮನ್ನೇ RE-START ಮಾಡಿಕೊಂಡು ಗೆಲ್ಲುವ ಸಾಹಸದ ಕತೆಗಳಲ್ಲಿ ಒಂದು ಥ್ರಿಲ್, ಮಾಂತ್ರಿಕತೆ ಇದೆ. ಸಾಮಾನ್ಯವಾಗಿ ಗೆದ್ದವರ ಸಾಹಸ ಕತೆಗಳು, ವಿಜಯಶಾಲಿಯಾದವರ ಸಾಹಸಯಾತ್ರೆ ಎಲ್ಲೆಡೆ ಸೌಂಡ್ ಮಾಡುವುದು ಸಾಮಾನ್ಯ. ಸೋತು ಗೆದ್ದವರ ಕತೆಗಳು ನಮ್ಮನ್ನು ಯಾವತ್ತೂ ರೋಮಾಂಚನಗೊಳಿಸುತ್ತದೆ. ಅನುಮಾನ, ಅವಮಾನ, ಅಡೆತಡೆ, ಆಲಸ್ಯ, ಮೋಸ, ನೋವು, ತಪ್ಪು, ಹಣೆಬರಹ, ಕಠಿಣ ಸಮಸ್ಯೆಗಳು, ಭಯ ಎಲ್ಲವನ್ನೂ ಬದಿಗಿಟ್ಟು ಛಲದಿಂದ RE-START ಮಾಡಿಕೊಳ್ಳುತ್ತಾ ಗೆಲ್ಲಲು ಹೊರಟವರ ಯಶಸ್ಸಿನ ಸೀಕ್ರೆಟ್ ಇದರಲ್ಲಿವೆ. ಸೋತವರಿಗೆ ಸಾಂತ್ವನ ನೀಡಿ, ಅವಮಾನ ಪಟ್ಟವರಿಗೆ, ಸೋಲು ಕಂಡವರಿಗೆ, ನೋವು ಉಂಡವರಿಗೆ, ಪ್ರೀತಿ ಬಿತ್ತಿ, ಜ್ಞಾನ ಬೆಳೆಸಿ ಶಕ್ತಿ ತುಂಬುವ, ವಿಜಯಶಾಲಿಗಳಾಗಲು ಮುನ್ನುಗ್ಗುವವರಿಗೆ ಗುರಿ ತೋರಿಸುವ ಒಂದು ಪ್ರಯತ್ನವಿದೆ. ಜೀವನದಲ್ಲಿ ಮುನ್ನುಗ್ಗಿ, ಈ ಪುಸ್ತಕವನ್ನು ಒಮ್ಮೆ ಓದಿ ನೋಡಿ. ಸೋಲು ಪ್ರಕೃತಿಯ ನಿಯಮವಾದರೆ, ಇಲ್ಲಿ ಎಲ್ಲವೂ ಸವಾಲು ಎಂದು ಮುನ್ನುಗ್ಗುತ್ತಾ ಆಗಾಗ ನಮ್ಮನ್ನೇ ನಾವು ರೀಸ್ಟಾರ್ಟ್ ಮಾಡಿಕೊಳ್ಳುತ್ತಾ, ಸಾಧನೆ ಮಾಡಲು ಪ್ರಶ್ನಿಸಿಕೊಳ್ಳುತ್ತಾ, ಏಕೆ ಸಾಧ್ಯವಿಲ್ಲವೆಂದು ಕೇಳಿಕೊಳ್ಳುತ್ತಾ, ನಿರಂತರ ಹೋರಾಡುವುದು ನಮ್ಮ ಕರ್ತವ್ಯ. ಆಗ ಯಶಸ್ಸುಗ್ಯಾರಂಟಿ!