ನಾನು ಅತ್ಯಂತ ಇಷ್ಟಪಡುವ ವ್ಯಕ್ತಿ ಲೀ ಕ ಶಿಂಗ್ ಹೇಳುತ್ತಾರೆ: ಬದುಕು, ಭವಿಷ್ಯ, ಸಂತೋಷ, ಶ್ರೀಮಂತಿಕೆ ಎಲ್ಲವನ್ನೂ ಪ್ಲಾನ್ ಮಾಡಬಹುದು! ನನ್ನ ಮೇಲೆ ಅತ್ಯಂತ ಪ್ರಭಾವ ಬೀರಿದ ವ್ಯಕ್ತಿ ಇವರು. ಅವರ ಪ್ರಕಾರ, Life can be designed. Careers can be planned. Happiness can be prepared. ಅಬ್ಬಾ ಅದೆಂತಹ ಸಾಲುಗಳು! ಅದೆಂತಹ ಆತ್ಮಶಕ್ತಿ! ಅದೆಂತಹ ವಿಶ್ವಾಸ! ಅದೆಷ್ಟು ನಂಬಿಕೆ ಅಲ್ವಾ? ಇಂದಿಗೆ 95ರ ಲೀ ಕ ಶಿಂಗ್ 15ನೇ ವಯಸ್ಸಿಗೆ ಶಾಲೆ ಬಿಟ್ಟು ದಿನಕ್ಕೆ 16 ತಾಸು ದುಡಿಯಲು ಶುರು ಮಾಡಿದವರು. ನಿಮಗೆಲ್ಲಾ ಗೊತ್ತಿರಲಿ ಜಗತ್ತಿನ ಮಿಲಿಯನೇರ್ ಮತ್ತು ಬಿಲಿಯನೇರ್ಗಳಲ್ಲಿ 85 ಪ್ರತಿಶತ ಸೆಲ್್ಫ ಮೇಡ್. ಅವರಿಗೂ ನಿಮ್ಮಂತೆ, ನನ್ನಂತೆ ಫ್ಯಾಮಿಲಿ, ಸಂಪತ್ತು ಅಥವಾ ಗಾಡ್ಫಾದರ್ ಇರಲಿಲ್ಲ. ಇಂದಿಗೆ ಅವರು ಹಾಂಗ್ ಕಾಂಗ್ನ ಅತಿ ದೊಡ್ಡ ಶ್ರೀಮಂತರಲ್ಲಿ ಒಬ್ಬರು! ಜಾಗತಿಕ ಮಟ್ಟದಲ್ಲೂ ಅತಿ ದೊಡ�... See more
ನಾನು ಅತ್ಯಂತ ಇಷ್ಟಪಡುವ ವ್ಯಕ್ತಿ ಲೀ ಕ ಶಿಂಗ್ ಹೇಳುತ್ತಾರೆ: ಬದುಕು, ಭವಿಷ್ಯ, ಸಂತೋಷ, ಶ್ರೀಮಂತಿಕೆ ಎಲ್ಲವನ್ನೂ ಪ್ಲಾನ್ ಮಾಡಬಹುದು! ನನ್ನ ಮೇಲೆ ಅತ್ಯಂತ ಪ್ರಭಾವ ಬೀರಿದ ವ್ಯಕ್ತಿ ಇವರು. ಅವರ ಪ್ರಕಾರ, Life can be designed. Careers can be planned. Happiness can be prepared. ಅಬ್ಬಾ ಅದೆಂತಹ ಸಾಲುಗಳು! ಅದೆಂತಹ ಆತ್ಮಶಕ್ತಿ! ಅದೆಂತಹ ವಿಶ್ವಾಸ! ಅದೆಷ್ಟು ನಂಬಿಕೆ ಅಲ್ವಾ? ಇಂದಿಗೆ 95ರ ಲೀ ಕ ಶಿಂಗ್ 15ನೇ ವಯಸ್ಸಿಗೆ ಶಾಲೆ ಬಿಟ್ಟು ದಿನಕ್ಕೆ 16 ತಾಸು ದುಡಿಯಲು ಶುರು ಮಾಡಿದವರು. ನಿಮಗೆಲ್ಲಾ ಗೊತ್ತಿರಲಿ ಜಗತ್ತಿನ ಮಿಲಿಯನೇರ್ ಮತ್ತು ಬಿಲಿಯನೇರ್ಗಳಲ್ಲಿ 85 ಪ್ರತಿಶತ ಸೆಲ್್ಫ ಮೇಡ್. ಅವರಿಗೂ ನಿಮ್ಮಂತೆ, ನನ್ನಂತೆ ಫ್ಯಾಮಿಲಿ, ಸಂಪತ್ತು ಅಥವಾ ಗಾಡ್ಫಾದರ್ ಇರಲಿಲ್ಲ. ಇಂದಿಗೆ ಅವರು ಹಾಂಗ್ ಕಾಂಗ್ನ ಅತಿ ದೊಡ್ಡ ಶ್ರೀಮಂತರಲ್ಲಿ ಒಬ್ಬರು! ಜಾಗತಿಕ ಮಟ್ಟದಲ್ಲೂ ಅತಿ ದೊಡ್ಡ ಶ್ರೀಮಂತರ ಸಾಲಿನಲ್ಲಿ ನಿಲ್ಲುತ್ತಾರೆ. ಅವರಿಗೆ ಸಾಧ್ಯವಾದರೆ ಅದು ನಮಗೂ ಸಾಧ್ಯ. ಇಂದಿಗೆ ಶ್ರೀಮಂತಿಕೆಗೆ ಲೀ ಕ ಶಿಂಗ್ ಮಾಡೆಲ್ ಅತ್ಯಂತ ಸೂಕ್ತವಾಗಿದೆ. ಏನಿದು ಲೀ ಕ ಶಿಂಗ್ ಮಾಡೆಲ್ ಎನ್ನುವುದರ ಬಗ್ಗೆ ಪುಸ್ತಕದಲ್ಲಿ ವಿವರವಿದೆ. ಈ ಪುಸ್ತಕದಲ್ಲಿರುವ ಅಧ್ಯಾಯಗಳನ್ನು ಅನುಭವಿಸಿ ಬರೆದದ್ದು. ಅಲ್ಲಲ್ಲಿ ನನ್ನ ಬದುಕಿನ ಸನ್ನಿವೇಶಗಳ ಉಲ್ಲೇಖವನ್ನೂ ಮಾಡಿದ್ದೇನೆ. ಶ್ರದ್ಧೆ, ಬತ್ತದ ಉತ್ಸಾಹ, ಹಂಬಲದ ಬೆಂಬಲವದ್ದಿರೆ ನಾವಂದುಕೊಂಡ ಎಲ್ಲವನ್ನೂ ಸಾಧಿಸಲು ಸಾಧ್ಯವಿದೆ. ಸಿರಿವಂತಿಕೆಗೆ ಸರಳ ಸೂತ್ರಗಳಿವೆ, ಅವುಗಳನ್ನು ಕೇವಲ ಓದಿ ಮುಂದಕ್ಕೆ ಹೋದರೆ ಪ್ರಯೋಜನವಿಲ್ಲ. ಇಲ್ಲಿನ ಸೂತ್ರಗಳನ್ನು ಅಳವಡಿಸಿಕೊಂಡರೆ ಎಲ್ಲರೂ ಶ್ರೀಮಂತರಾಗಬಹುದು! - Good Luck. - ರಂಗಸ್ವಾಮಿ ಮೂಕನಹಳ್ಳಿ