ಈ ಬ್ರಹ್ಮಾಂಡದಲ್ಲಿ ಅನೇಕ ರಹಸ್ಯಗಳು ಅಡಗಿವೆ. ಇಂಥಹ ನಿಗೂಢ ಜಗತ್ತಿನಲ್ಲಿ ಅಡಗಿರುವ ಅತ್ಯದ್ಭುತ, ಅನೂಹ್ಯ ಹಾಗೂ ವಿಸ್ಮಯಕಾರಿ ತಾಣವೇ ಶಂಬಾಲ! ಶಂಬಾಲವು ಅತ್ಯಂತ ಪವಿತ್ರ, ಭವ್ಯ ಹಾಗೂ ಶಕ್ತಿಶಾಲಿ ತಾಣವಾಗಿದ್ದು ಸ್ವರ್ಗಕ್ಕೂ ಮಿಗಿಲಾದ ಸೌಕರ್ಯಗಳನ್ನು ಒಳಗೊಂಡಿರುವ ಹಿಮಾಲಯದ ಅದೃಶ್ಯನಗರವಾಗಿದ್ದು ಪವಿತ್ರ ದೇವತೆಗಳು ಹಾಗೂ ಶುದ್ಧಾತ್ಮರಾದ ಋಷಿ-ಮುನಿಗಳ ತಾಣವಾಗಿದೆ. ಇದೊಂದು ಶೋಧ ಕಥನವಾಗಿದ್ದು ಈ ಕೃತಿಯಲ್ಲಿನ ಕಥಾ ನಾಯಕನು ಜೀವನದ ಎಲ್ಲ ಬಗೆಯ ನೋವು-ನಲಿವು ಹಾಗೂ ಸುಖ-ವೈಭೋಗಗಳನ್ನು ಅನುಭವಿಸಿ ಅವುಗಳು ಶಾಶ್ವತವಾದ ಸುಖ-ಶಾಂತಿ-ನೆಮ್ಮದಿಗಳನ್ನು ನೀಡುವುದಿಲ್ಲವೆಂದು ಅರಿವಾಗುತ್ತಲೇ ಜೀವನದ ನಿಜವಾದ ಅರ್ಥ, ಉದ್ದೇಶ ಹಾಗೂ ಗುರಿಯನ್ನು ಯೋಗ & ಅಧ್ಯಾತ್ಮಿಕ ಮಾರ್ಗದಲ್ಲಿ ಹುಡುಕಲು ತನ್ನ ಸರ್ವಸ್ವವನ್ನೂ ತ್ಯಾಗಮಾಡಿ ಹಿಮಾಲಯಕ್ಕ... See more
ಈ ಬ್ರಹ್ಮಾಂಡದಲ್ಲಿ ಅನೇಕ ರಹಸ್ಯಗಳು ಅಡಗಿವೆ. ಇಂಥಹ ನಿಗೂಢ ಜಗತ್ತಿನಲ್ಲಿ ಅಡಗಿರುವ ಅತ್ಯದ್ಭುತ, ಅನೂಹ್ಯ ಹಾಗೂ ವಿಸ್ಮಯಕಾರಿ ತಾಣವೇ ಶಂಬಾಲ! ಶಂಬಾಲವು ಅತ್ಯಂತ ಪವಿತ್ರ, ಭವ್ಯ ಹಾಗೂ ಶಕ್ತಿಶಾಲಿ ತಾಣವಾಗಿದ್ದು ಸ್ವರ್ಗಕ್ಕೂ ಮಿಗಿಲಾದ ಸೌಕರ್ಯಗಳನ್ನು ಒಳಗೊಂಡಿರುವ ಹಿಮಾಲಯದ ಅದೃಶ್ಯನಗರವಾಗಿದ್ದು ಪವಿತ್ರ ದೇವತೆಗಳು ಹಾಗೂ ಶುದ್ಧಾತ್ಮರಾದ ಋಷಿ-ಮುನಿಗಳ ತಾಣವಾಗಿದೆ. ಇದೊಂದು ಶೋಧ ಕಥನವಾಗಿದ್ದು ಈ ಕೃತಿಯಲ್ಲಿನ ಕಥಾ ನಾಯಕನು ಜೀವನದ ಎಲ್ಲ ಬಗೆಯ ನೋವು-ನಲಿವು ಹಾಗೂ ಸುಖ-ವೈಭೋಗಗಳನ್ನು ಅನುಭವಿಸಿ ಅವುಗಳು ಶಾಶ್ವತವಾದ ಸುಖ-ಶಾಂತಿ-ನೆಮ್ಮದಿಗಳನ್ನು ನೀಡುವುದಿಲ್ಲವೆಂದು ಅರಿವಾಗುತ್ತಲೇ ಜೀವನದ ನಿಜವಾದ ಅರ್ಥ, ಉದ್ದೇಶ ಹಾಗೂ ಗುರಿಯನ್ನು ಯೋಗ & ಅಧ್ಯಾತ್ಮಿಕ ಮಾರ್ಗದಲ್ಲಿ ಹುಡುಕಲು ತನ್ನ ಸರ್ವಸ್ವವನ್ನೂ ತ್ಯಾಗಮಾಡಿ ಹಿಮಾಲಯಕ್ಕೆ ತೆರಳಿ ಕಠಿಣ ಸಾಧನೆಗೈದು ಯೋಗಿಯಾಗಿ ಮಾರ್ಪಟ್ಟು ನಂತರ ಈ ನಿಗೂಢತಾಣದ ಶೋಧದಲ್ಲಿ ಹಿಮಾಲಯದ ಉದ್ದಗಲಕ್ಕೂ ಅವಿರತವಾಗಿ ಸಂಚರಿಸುತ್ತಾ ಅಂತಿಮವಾಗಿ ಶಂಬಾಲವನ್ನು ಸೇರಿ ಈ ಹಿಂದೆ ತಾನು ಬಯಸಿದ್ದ ಶಾಶ್ವತ ಸುಖ-ಶಾಂತಿಗೂ ಮೀರಿದ ನೆಮ್ಮದಿ ಹಾಗೂ ಸಾರ್ಥಕತೆ ಪಡೆಯುವ ರೋಚಕ ಕಥೆಯಾಗಿದೆ. ಈ ಕೃತಿಯಲ್ಲಿ ಜೀವನವನ್ನು ಉನ್ನತಿಯತ್ತ ಪ್ರೇರೆಪಿಸುವ ಸಂಗತಿಗಳಿವೆ, ಯೌಗಿಕ ಹಾಗೂ ಅಧ್ಯಾತ್ಮ ಸಾಧನೆಯ ಅಗೋಚರ ಸಂಗತಿಗಳ ಮಾಹಿತಿಯಿದೆ. ಹಾಗೂ ಸೃಷ್ಟಿಯ ಅನೇಕ ನಿಗೂಢ ರಹಸ್ಯಗಳ ಅನಾವರಣವಿದೆ; ಇದರೊಂದಿಗೆ ಹಿಮಾಲಯದ ಕುರಿತಾದ ಅಪರೂಪದ ನಿರೂಪಣೆಯಿದ್ದುಓದುಗರಿಗೆ ವಿಭಿನ್ನವಾದ ಅನುಭವನೀಡಲಿದೆ.