ಇಡೀ ಜಗತ್ತಿಗೆ ನಾವು ಎದುರಾಬದುರಾ ನಿಂತು, ನೋಡುತ್ತಾ, ಗಮನಿಸುತ್ತಾ ಹೋರಾಡುತ್ತೇವೆ. ಆಗೆಲ್ಲಾ ನಾವು ನಂಬುವವರ ಕಡೆಗೆ ಬೆನ್ನು ಕೊಡುತ್ತೇವೆ. ಏಕೆಂದರೆ ನಾವು ಕಣ್ಣಿಡದಿದ್ದರೂ ಅಲ್ಲಿಂದ ದಾಳಿ ಆಗದು ಎನ್ನುವ ಅಚಲ ನಂಬಿಕೆ. ಹಾಗಾಗಿಯೇ ಬೆನ್ನಿಗೆ ತಿವಿದ ಚೂರಿಗಳಿಗೆ ನಾವು ಎಂದೂ ತಯಾರಾಗಿರುವುದಿಲ್ಲ.’ ‘ರೆಡ್ಡಿಯ ಸಂಸಾರದ ನಂಬಿಕೆಯನ್ನು ಉಳಿಸಿಕೊಳ್ಳುವ ಹೊಣೆ ರೆಡ್ಡಿಯದೇ ಹೊರತು, ಅರುಂಧತಿಯದು ಹೇಗಾಗುತ್ತದೆ? ನಾವೇಕೆ ಯಾವಾಗಲೂ ಗಂಡಸರನ್ನು ಜವಾಬ್ದಾರಿಯಿಂದ ಮುಕ್ತಗೊಳಿಸುತ್ತೇವೆ?’ ‘ಹೋಗಬೇಕು ಅಂತ ಒಂದ್ ಸಲ ಮನಸ್ಸು ಮಾಡಿದ್ರೆ ಆಯ್ತು, ಹೋಗೋ ಧೈರ್ಯ, ಹೋಗೋಕೆ ಕಾರಣ ಎರಡನ್ನೂ ಕೊಡ್ತದೆ ಮನಸ್ಸು... ಸಂಬಂಧದ ಒಳಗೆ ಹೋಗಬೇಕಾದರೂ ಅಷ್ಟೆ, ಅಲ್ಲಿಂದ ಹೊರಗೆ ಹೋಗಬೇಕಾದರೂ ಅಷ್ಟೆ...’ ‘ನಿರ್ಣಯ ತೆಗೆದುಕೊಳ್ಳುವವರು ಸರಿಯಾಗಿ ಯೋಚಿಸಿ, ಅಳ�... See more
ಇಡೀ ಜಗತ್ತಿಗೆ ನಾವು ಎದುರಾಬದುರಾ ನಿಂತು, ನೋಡುತ್ತಾ, ಗಮನಿಸುತ್ತಾ ಹೋರಾಡುತ್ತೇವೆ. ಆಗೆಲ್ಲಾ ನಾವು ನಂಬುವವರ ಕಡೆಗೆ ಬೆನ್ನು ಕೊಡುತ್ತೇವೆ. ಏಕೆಂದರೆ ನಾವು ಕಣ್ಣಿಡದಿದ್ದರೂ ಅಲ್ಲಿಂದ ದಾಳಿ ಆಗದು ಎನ್ನುವ ಅಚಲ ನಂಬಿಕೆ. ಹಾಗಾಗಿಯೇ ಬೆನ್ನಿಗೆ ತಿವಿದ ಚೂರಿಗಳಿಗೆ ನಾವು ಎಂದೂ ತಯಾರಾಗಿರುವುದಿಲ್ಲ.’ ‘ರೆಡ್ಡಿಯ ಸಂಸಾರದ ನಂಬಿಕೆಯನ್ನು ಉಳಿಸಿಕೊಳ್ಳುವ ಹೊಣೆ ರೆಡ್ಡಿಯದೇ ಹೊರತು, ಅರುಂಧತಿಯದು ಹೇಗಾಗುತ್ತದೆ? ನಾವೇಕೆ ಯಾವಾಗಲೂ ಗಂಡಸರನ್ನು ಜವಾಬ್ದಾರಿಯಿಂದ ಮುಕ್ತಗೊಳಿಸುತ್ತೇವೆ?’ ‘ಹೋಗಬೇಕು ಅಂತ ಒಂದ್ ಸಲ ಮನಸ್ಸು ಮಾಡಿದ್ರೆ ಆಯ್ತು, ಹೋಗೋ ಧೈರ್ಯ, ಹೋಗೋಕೆ ಕಾರಣ ಎರಡನ್ನೂ ಕೊಡ್ತದೆ ಮನಸ್ಸು... ಸಂಬಂಧದ ಒಳಗೆ ಹೋಗಬೇಕಾದರೂ ಅಷ್ಟೆ, ಅಲ್ಲಿಂದ ಹೊರಗೆ ಹೋಗಬೇಕಾದರೂ ಅಷ್ಟೆ...’ ‘ನಿರ್ಣಯ ತೆಗೆದುಕೊಳ್ಳುವವರು ಸರಿಯಾಗಿ ಯೋಚಿಸಿ, ಅಳೆದು, ಸುರಿದು ನಿರ್ಧಾರ ಮಾಡುತ್ತಾರಾದ್ದರಿಂದ ಅದರ ಪರಿಣಾಮ ಅವರನ್ನು ಘಾಸಿಗೊಳಿಸುವುದಿಲ್ಲ. ಆದರೆ ಅದನ್ನು ಕೇಳಿಸಿಕೊಳ್ಳುವವರಿಗೆ ಹಾಗಲ್ಲ, ಅವರು ಅನಿವಾರ್ಯವಾಗಿ ಇನ್ನೊಬ್ಬರು ಮಾಡಿದ ನಿರ್ಧಾರವನ್ನು ಅರಗಿಸಿಕೊಳ್ಳಬೇಕು, ಅದರ ಪರಿಣಾಮಗಳನ್ನು ಅರಗಿಸಿಕೊಳ್ಳಬೇಕು, ಮನಸ್ಸನ್ನು ಅದಕ್ಕೆ ಹೊಂದಿಸಬೇಕು...’ ‘ಬಹುಶಃ ಎಲ್ಲಾ ಮದುವೆಗಳೂ ಒಂದು ರೀತಿಯಲ್ಲಿ ಅಘೋಷಿತ open marriagesಗಳೇ...’ ‘ನನ್ನ ಜೀವನದ ಅನುಭವ ಮಗಳ ಬದುಕಿನ ಪ್ರಶ್ನೆಗಳಿಗೆ ಉತ್ತರ ಕೊಡಬಹುದು ಅಂದುಕೊಳ್ಳುತ್ತಿದ್ದೇನೆ. ಆದರೆ ಪ್ರತಿಯೊಂದು ಜನಾಂಗದಲ್ಲೂ ಬದುಕಿನ ಪ್ರಶ್ನೆಪತ್ರಿಕೆಯೇ ಬದಲಾದರೆ ನಮ್ಮ ಹಳೆಯ ನೋಟ್ಸ್ನಿಂದ ಅದನ್ನು ಉತ್ತರಿಸುತ್ತೇವೆ ಅಂದುಕೊಳ್ಳಲು ಸಾಧ್ಯವೆ?’ ‘ಇಷ್ಟು ದಿನ ಪ್ರೀತಿಯ ವಿರುದ್ಧ ಪದ ದ್ವೇಷ ಅಂದುಕೊಂಡಿದ್ದೆ. ಆದರೆ ಅದು ದ್ವೇಷವಲ್ಲ ಸರೋಜಿನಿ, ನಿರ್ಭಾವುಕತೆ. ದ್ವೇಷಿಸಬೇಕಾದರೂ ಏನಾದರೂ ಸಂಬಂಧ ಇರಬೇಕು.’