A Self-help book written by Mahabala Seethalabhavi ಈ ಪುಸ್ತಕ ಓದುವ ತಪ್ಪು ನೀವೇಕೆ ಮಾಡಬೇಕು?! ಇವತ್ತು ನಮ್ಮ ಬದುಕಿನಲ್ಲಿ ನೆಮ್ಮದಿ ಹಾಗೂ ಖುಷಿಗಳು ದುಬಾರಿ ಬಾಬ್ತಾಗಿವೆ. ಕಷ್ಟಪಟ್ಟರೆ ಹಣ ಗಳಿಸಬಹುದು, ಆದರೆ ನೆಮ್ಮದಿಯನ್ನು ಎಲ್ಲಿಂದ ತರೋಣ? ಹಾಗಂತ ನೆಮ್ಮದಿಯಾಗಿರುವುದು ಅಷ್ಟೊಂದು ಕಷ್ಟವೇ? ಖಂಡಿತ ಅಲ್ಲ. ವಾಸ್ತವವಾಗಿ ಅದು ಹೇಗೆಂಬದೂ ನಮಗೆ ಗೊತ್ತು. ಆದರೆ, ನೆನಪಿಸುವವರು ಬೇಕು. ಈ ವಿಷಯದಲ್ಲಿ ನಾವು ಅಪ್ಪಟ ಹನೂಮಂತರು. ನಮಗೆ ಗೊತ್ತಿಲ್ಲದೆಯೇ ನಾವು ತೀರಾ ಸಾಮಾನ್ಯ ಎಂಬಂತಹ ಕೆಲ ತಪ್ಪುಗಳನ್ನು ಮಾಡುತ್ತಿರುತ್ತೇವೆ. ಇವೇ ನಮ್ಮ ನೆಮ್ಮದಿಯನ್ನೂ, ಖುಷಿಯನ್ನೂ ಕಿತ್ತುಕೊಳ್ಳುತ್ತಿವೆ. ಇವುಗಳನ್ನು ಸರಿಪಡಿಸಿಕೊಂಡು, ಪ್ರಯತ್ನ ಪೂರ್ವಕವಾಗಿ ಕೆಲ ಬದಲಾವಣೆ ಮಾಡಿಕೊಂಡರೆ ಎಲ್ಲರ ಬದುಕೂ ಸುಂದರವಾಗುತ್ತದೆ. ಅಷ್ಟೇ ಅಲ್ಲ, ಇವು ಯಶಸ್ಸಿನತ್ತಲೂ ನಮ್ಮನ್ನು ಕೊಂಡೊ�... See more
A Self-help book written by Mahabala Seethalabhavi ಈ ಪುಸ್ತಕ ಓದುವ ತಪ್ಪು ನೀವೇಕೆ ಮಾಡಬೇಕು?! ಇವತ್ತು ನಮ್ಮ ಬದುಕಿನಲ್ಲಿ ನೆಮ್ಮದಿ ಹಾಗೂ ಖುಷಿಗಳು ದುಬಾರಿ ಬಾಬ್ತಾಗಿವೆ. ಕಷ್ಟಪಟ್ಟರೆ ಹಣ ಗಳಿಸಬಹುದು, ಆದರೆ ನೆಮ್ಮದಿಯನ್ನು ಎಲ್ಲಿಂದ ತರೋಣ? ಹಾಗಂತ ನೆಮ್ಮದಿಯಾಗಿರುವುದು ಅಷ್ಟೊಂದು ಕಷ್ಟವೇ? ಖಂಡಿತ ಅಲ್ಲ. ವಾಸ್ತವವಾಗಿ ಅದು ಹೇಗೆಂಬದೂ ನಮಗೆ ಗೊತ್ತು. ಆದರೆ, ನೆನಪಿಸುವವರು ಬೇಕು. ಈ ವಿಷಯದಲ್ಲಿ ನಾವು ಅಪ್ಪಟ ಹನೂಮಂತರು. ನಮಗೆ ಗೊತ್ತಿಲ್ಲದೆಯೇ ನಾವು ತೀರಾ ಸಾಮಾನ್ಯ ಎಂಬಂತಹ ಕೆಲ ತಪ್ಪುಗಳನ್ನು ಮಾಡುತ್ತಿರುತ್ತೇವೆ. ಇವೇ ನಮ್ಮ ನೆಮ್ಮದಿಯನ್ನೂ, ಖುಷಿಯನ್ನೂ ಕಿತ್ತುಕೊಳ್ಳುತ್ತಿವೆ. ಇವುಗಳನ್ನು ಸರಿಪಡಿಸಿಕೊಂಡು, ಪ್ರಯತ್ನ ಪೂರ್ವಕವಾಗಿ ಕೆಲ ಬದಲಾವಣೆ ಮಾಡಿಕೊಂಡರೆ ಎಲ್ಲರ ಬದುಕೂ ಸುಂದರವಾಗುತ್ತದೆ. ಅಷ್ಟೇ ಅಲ್ಲ, ಇವು ಯಶಸ್ಸಿನತ್ತಲೂ ನಮ್ಮನ್ನು ಕೊಂಡೊಯ್ಯುತ್ತವೆ. ಅಂತಹ 66 ಐಡಿಯಾಗಳು ಈ ಪುಸ್ತಕದಲ್ಲಿವೆ. ಇದನ್ನು ಓದಿದ ಮೇಲೆ ಅಯ್ಯೋ ಹೌದಲ್ಲಾ, ನಾನೂ ಈ ತಪ್ಪು ಮಾಡುತ್ತಿದ್ದೇನಲ್ಲ ಎಂದು ನಿಮಗೆ ಅನ್ನಿಸದಿದ್ದರೆ ಹೇಳಿ. ಇವೆಲ್ಲವೂ tried and tested ಟೆಕ್ನಿಕ್ಗಳು. ಹಾಗಾಗಿ ಪರಿಣಾಮ ಬೀರುವುದು ಗ್ಯಾರಂಟಿ.