ಹಾಂಟೆಡ್ ಹೊಸಮನೆ, ಇದೊಂದು ಕ್ಷಣಕ್ಷಣದ ರೋಚಕ ಘಟನೆಗಳು ಇರುವ ಸಸ್ಪೆನ್ಸ್-ಹಾರರ್ ಕಾದಂಬರಿ. ಈ ಕಾದಂಬರಿಯಲ್ಲಿ ಮನೆಯೊಂದರಲ್ಲಿ ಗೃಹಪ್ರವೇಶದಂದು ಮಾರಣಹೋಮವಾದಾಗ ಆಗುವ ಕಷ್ಟನಷ್ಟಗಳು, ಹಾಂಟೆಡ್ ಮನೆಯೆಂಬ ಕುಖ್ಯಾತಿ, ಯಾರದೋ ತಂತ್ರ, ಕುತಂತ್ರಗಳು, ನಡೆಯುವ ದುರಂತಗಳು, ಆ ಮನೆಯಲ್ಲಿ ಆಗುವ ಹಾಂಟೆಡ್ ಅನುಭವಗಳು, ಅದನ್ನು ತನಿಖೆ ಮಾಡುವವರ ಸಾಹಸ, ಹೀಗೆ ಕ್ಷಣಕ್ಷಣಗಳ ಮೈನವಿರೇಳಿಸುವ ವ್ಯಾಖ್ಯಾನಗಳಿದ್ದು ಓದುಗರನ್ನು ಸಂಪೂರ್ಣವಾಗಿ ತನ್ನತ್ತ ಸೆಳೆದುಕೊಳ್ಳುತ್ತದೆ ಹಾಂಟೆಡ್ ಹೊಸಮನೆ.
>
ರಮೇಶ್ ಶೆಟ್ಟಿಗಾರ್ ಮಂಜೇಶ್ವರ, ಇವರು ಮಾನವ ಸಂಪನ್ಮೂಲ ಮುಖ್ಯಸ್ಥರಾಗಿ ಹಲವು ವರ್ಷಗಳ ಕಾಲ ಅಂತಾರಾಷ್ಟ್ರೀಯ ಕಂಪೆನಿಗಳಲ್ಲಿ ಸೇವೆ ಸಲ್ಲಿಸಿದ್ದು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಲೇಖಕರ ಹಲವು ಹಾಂಟೆಡ್ ಕತೆಗಳಲ್ಲಿ ಇತ್ತೀಚೆಗೆ ಬ�... See more
ಹಾಂಟೆಡ್ ಹೊಸಮನೆ, ಇದೊಂದು ಕ್ಷಣಕ್ಷಣದ ರೋಚಕ ಘಟನೆಗಳು ಇರುವ ಸಸ್ಪೆನ್ಸ್-ಹಾರರ್ ಕಾದಂಬರಿ. ಈ ಕಾದಂಬರಿಯಲ್ಲಿ ಮನೆಯೊಂದರಲ್ಲಿ ಗೃಹಪ್ರವೇಶದಂದು ಮಾರಣಹೋಮವಾದಾಗ ಆಗುವ ಕಷ್ಟನಷ್ಟಗಳು, ಹಾಂಟೆಡ್ ಮನೆಯೆಂಬ ಕುಖ್ಯಾತಿ, ಯಾರದೋ ತಂತ್ರ, ಕುತಂತ್ರಗಳು, ನಡೆಯುವ ದುರಂತಗಳು, ಆ ಮನೆಯಲ್ಲಿ ಆಗುವ ಹಾಂಟೆಡ್ ಅನುಭವಗಳು, ಅದನ್ನು ತನಿಖೆ ಮಾಡುವವರ ಸಾಹಸ, ಹೀಗೆ ಕ್ಷಣಕ್ಷಣಗಳ ಮೈನವಿರೇಳಿಸುವ ವ್ಯಾಖ್ಯಾನಗಳಿದ್ದು ಓದುಗರನ್ನು ಸಂಪೂರ್ಣವಾಗಿ ತನ್ನತ್ತ ಸೆಳೆದುಕೊಳ್ಳುತ್ತದೆ ಹಾಂಟೆಡ್ ಹೊಸಮನೆ.
>
ರಮೇಶ್ ಶೆಟ್ಟಿಗಾರ್ ಮಂಜೇಶ್ವರ, ಇವರು ಮಾನವ ಸಂಪನ್ಮೂಲ ಮುಖ್ಯಸ್ಥರಾಗಿ ಹಲವು ವರ್ಷಗಳ ಕಾಲ ಅಂತಾರಾಷ್ಟ್ರೀಯ ಕಂಪೆನಿಗಳಲ್ಲಿ ಸೇವೆ ಸಲ್ಲಿಸಿದ್ದು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಲೇಖಕರ ಹಲವು ಹಾಂಟೆಡ್ ಕತೆಗಳಲ್ಲಿ ಇತ್ತೀಚೆಗೆ ಬರೆದ ʼಶಿರಾಡಿ ಘಾಟ್ʼ ಎಂಬ ಹಾರರ್ ಕಥೆಯು ವಾಟ್ಸಾಪ್ ಮೂಲಕ ಎಲ್ಲೆಡೆ ವೈರಲ್ ಆಗಿತ್ತು. ವೈಶಿಷ್ಟ್ಯಪೂರ್ಣವಾದ ನಿರೂಪಣಾ ಶೈಲಿಯ ಕಥೆಗಾರರಾದ ಇವರು 2016ರಲ್ಲಿ ಅಪೂರ್ಣ ಸತ್ಯ ಎಂಬ ಬಹುಮಾನಿತ ಕಥಾಸಂಕಲನವನ್ನೂ 2019ರಲ್ಲಿ ಮದನಿಕೆ, ದಿ ಲಾಸ್ಟ್ ಸೀನ್ ಎಂಬ ಕೌತುಕಮಯ ಕಾದಂಬರಿಯನ್ನೂ ಬರೆದಿದ್ದಾರೆ.. ಇದಲ್ಲದೆ ಇವರ ಕಥೆ, ಲೇಖನಗಳು ತರಂಗ, ಸುಧಾ, ಕರ್ಮವೀರ, ಮಂಗಳ, ಯುಗಪುರುಷ ಇತ್ಯಾದಿ ಪತ್ರಿಕೆಗಳಲ್ಲಿ ಬಂದಿದೆ. ಇವರ ಫೇಸ್ಬಬುಕ್ ಮತ್ತು ಪ್ರತಿಲಿಪಿಯಲ್ಲಿ ಇವರ ಹಲವು ರಚನೆಗಳು ಬಂದಿದ್ದು ಅದಕ್ಕೆಲ್ಲಾ ಉತ್ತಮ ಪ್ರತಿಕ್ರಿಯೆಗಳು ಲಭ್ಯವಾಗಿವೆ.