ಒಬ್ಬ ಭಗ್ನಪ್ರೇಮಿಯ ನೋವನ್ನು ಇನ್ನೊಬ್ಬ ಭಗ್ನಪ್ರೇಮಿ ಮಾತ್ರ ಅರ್ಥಮಾಡಿಕೊಳ್ಳಲು ಸಾಧ್ಯ. ಅಂತಹದೇ ಒಬ್ಬ ಭಗ್ನಪ್ರೇಮಿಯ ಖಾಸಗಿ ನೋವಿನ ಡೈರಿಯ ಪುಟಗಳು ಇಲ್ಲಿವೆ. ಇದನ್ನು ಓದಿ ನವಪ್ರೇಮಿಗಳು ಇಲ್ಲಿಂದಲೆ ಎಚ್ಚರ ವಹಿಸಬಹುದು. ಈಗಾಗಲೇ ಭಗ್ನಗೊಂಡವರು ನಮ್ಮಂಥವರು ಹಲವರಿದ್ದಾರೆ ಎಂದು ಸಮಾಧಾನ ಪಟ್ಟುಕೊಳ್ಳಬಹುದು. -ಸಚಿನ್ ತೀರ್ಥಹಳ್ಳಿ ಭಗ್ನಪ್ರೇಮಿ ಕಟ್ಟಿದ ಕೋಟೆಯ ಮೇಲೆ ಕಾವಲುಗಾರನಿಲ್ಲ. ಏಕೆಂದರೆ ಅವನ ಸಾಮ್ರಾಜ್ಯ ಬರಿದೋ ಬರಿದು. ಅವನ ಅರಮನೆಯೊಳಗೆ ಸಿಂಹಾಸನವೂ ಕಾಣೆ. ಆದರೆ ಅವಳ ಅಂತರಂಗದಲ್ಲಿ ನಿತ್ಯವೂ ಪಟ್ಟಾಭಿಷೇಕ. ಇದನ್ನೆಲ್ಲಾ ಹದಿಹರೆಯದ ವ್ಯಾಮೋಹದ ಮೂಲಕ ಈ ಕಾದಂಬರಿ ಹೇಳುತ್ತದೆ. -ಗೋಪಾಲಕೃಷ್ಣ ಕುಂಟಿನಿ ನಿಮ್ಮೆಲ್ಲಾ ಪ್ರೇಮಗಳೂ ಫಲಿಸಿವೆ ಅಂದುಕೊಂಡಿದ್ದೆ. ಭಗ್ನಗೊಂಡವೂ ಇದ್ದಾವೆ ಎಂದು ಗೊತ್ತಾಗಿ ಸಂತೋಷವಾಯಿತು. ಒಮ�... See more
ಒಬ್ಬ ಭಗ್ನಪ್ರೇಮಿಯ ನೋವನ್ನು ಇನ್ನೊಬ್ಬ ಭಗ್ನಪ್ರೇಮಿ ಮಾತ್ರ ಅರ್ಥಮಾಡಿಕೊಳ್ಳಲು ಸಾಧ್ಯ. ಅಂತಹದೇ ಒಬ್ಬ ಭಗ್ನಪ್ರೇಮಿಯ ಖಾಸಗಿ ನೋವಿನ ಡೈರಿಯ ಪುಟಗಳು ಇಲ್ಲಿವೆ. ಇದನ್ನು ಓದಿ ನವಪ್ರೇಮಿಗಳು ಇಲ್ಲಿಂದಲೆ ಎಚ್ಚರ ವಹಿಸಬಹುದು. ಈಗಾಗಲೇ ಭಗ್ನಗೊಂಡವರು ನಮ್ಮಂಥವರು ಹಲವರಿದ್ದಾರೆ ಎಂದು ಸಮಾಧಾನ ಪಟ್ಟುಕೊಳ್ಳಬಹುದು. -ಸಚಿನ್ ತೀರ್ಥಹಳ್ಳಿ ಭಗ್ನಪ್ರೇಮಿ ಕಟ್ಟಿದ ಕೋಟೆಯ ಮೇಲೆ ಕಾವಲುಗಾರನಿಲ್ಲ. ಏಕೆಂದರೆ ಅವನ ಸಾಮ್ರಾಜ್ಯ ಬರಿದೋ ಬರಿದು. ಅವನ ಅರಮನೆಯೊಳಗೆ ಸಿಂಹಾಸನವೂ ಕಾಣೆ. ಆದರೆ ಅವಳ ಅಂತರಂಗದಲ್ಲಿ ನಿತ್ಯವೂ ಪಟ್ಟಾಭಿಷೇಕ. ಇದನ್ನೆಲ್ಲಾ ಹದಿಹರೆಯದ ವ್ಯಾಮೋಹದ ಮೂಲಕ ಈ ಕಾದಂಬರಿ ಹೇಳುತ್ತದೆ. -ಗೋಪಾಲಕೃಷ್ಣ ಕುಂಟಿನಿ ನಿಮ್ಮೆಲ್ಲಾ ಪ್ರೇಮಗಳೂ ಫಲಿಸಿವೆ ಅಂದುಕೊಂಡಿದ್ದೆ. ಭಗ್ನಗೊಂಡವೂ ಇದ್ದಾವೆ ಎಂದು ಗೊತ್ತಾಗಿ ಸಂತೋಷವಾಯಿತು. ಒಮ್ಮೊಮ್ಮೆ ಅನ್ನಿಸುತ್ತದೆ; ಪ್ರೇಮ ಭಗ್ನಗೊಂಡ ಅವಳೇ ಅದೃಷ್ಟವಂತೆ. ನಾನೀಗ ಜಮುನಾಳನ್ನು ಹುಡುಕುತ್ತಿದ್ದೇನೆ, ಅಭಿನಂದನೆ ಹೇಳುವುದಕ್ಕೆ. -ಜ್ಯೋತಿ ಎನ್ ಭಗ್ನಪ್ರೇಮ ಎಂಬ ಭಾವವೇ ನಶಿಸುತ್ತಿರುವ ಕಾಲದಲ್ಲಿ ಪ್ರೇಮದ ಮಾಧುರ್ಯ, ವಿರಹದ ಸಂಕಟ, ಬದುಕಿನ ವಿಷಾದವನ್ನು ಧರಿಸಿ ಬಂದಿರುವ ಆಹ್ಲಾದಕರ ಕತೆ ಇದು. ನಡೆದು ಬಂದ ದಾರಿಯ ಹಸಿರು ನೆನಪನ್ನು ಕೆದಕುವ ಕಲಕುವ ಸುಡುವ ಗಾಢನೆನಪಿನಚಿತ್ರ. -ರಾಜೇಶ್ ಶೆಟ್ಟಿ